ಜೋಬ್ 1 -

ಒಂದು ಪ್ರಾಚೀನ ಸಂಸ್ಕøತಿ. ಉತ್ತರ ಬಲೂಚಿಸ್ತಾನದ ಜೋಬ್ ನದೀಬಯಲಿನಲ್ಲಿ ಈ ಸಂಸ್ಕøತಿಯ ನೆಲೆಗಳು ಸಿಕ್ಕಿರುವುದರಿಂದ ಇದಕ್ಕೆ ಈ ಹೆಸರು ಬಂದಿದೆ. ಇಲ್ಲಿಯ ರಾಣಗುಂಡೈ, ಮೊಗಲ್ ಗುಂಡೈ, ಪೆರಿಯಾನೊ ಗುಂಡೈ, ಲೋರಲೈ ಮುಂತಾದ ಸ್ಥಳಗಳಲ್ಲಿ ತಾಮ್ರ ಶಿಲಾಯುಗ ಮತ್ತು ಅದಕ್ಕೂ ಹಿಂದಿನ ಸಂಸ್ಕøತಿಯ ಅವಶೇಷಗಳು ದೊರೆತಿವೆ. ಇಲ್ಲಿ ದೊರೆತಿರುವ ತಾಮ್ರಶಿಲಾಯುಗದ ಸುಂದರವಾದ ಮಣ್ಣಿನ ಪಾತ್ರೆಗಳು ಚಕ್ರದ ಮೇಲೆ ಮಾಡಿದವಾಗಿವೆ. ಕೆಂಪು ಬಣ್ಣದ ಈ ಮಣ್ಣಿನ ಪಾತ್ರೆಗಳ ಮೇಲೆ ಕಪ್ಪು ಬಣ್ಣದಲ್ಲಿ ಗೂಳಿಯ ಸಾಲು ಮತ್ತು ಜ್ಯಾಮಿತೀಯ ನಕಾಸೆಗಳನ್ನು ಚಿತ್ರಿಸಲಾಗಿದೆ. ಸುಟ್ಟಮಣ್ಣಿನ ಅನೇಕ ಹೆಣ್ಣುಗೊಂಬೆಗಳೂ ದೊರೆಕಿವೆ. ಈ ಕಾಲದಲ್ಲಿ ಹಸಿ ಇಟ್ಟಿಗೆಯ ಕಟ್ಟಡಗಳು ರೂಢಿಯಲ್ಲಿದ್ದವು. ಶವಗಳನ್ನು ದಹನಮಾಡುವ ಪದ್ಧತಿ ಜಾರಿಯಲ್ಲಿತ್ತು. ಈ ವೈಶಿಷ್ಟ್ಯಗಳನ್ನುಳ್ಳ ಸಂಸ್ಕøತಿಯನ್ನು ಜೋಬ್ ಸಂಸ್ಕøತಿಯೆಂದು ಹೆಸರಿಸಲಾಗಿದೆ. ವ್ಯಾಪಾರಕೇಂದ್ರಗಳಾಗಿದ್ದುದರಿಂದ ಇವು ದಕ್ಷಿಣ ಬಲೂಚಿಸ್ತಾನ, ಇರಾನ್ ಮುಂತಾದ ಸ್ಥಳಗಳೊಡನೆ ನಿಕಟ ಸಂಪರ್ಕ ಹೊಂದಿದ್ದಿರಬೇಕು. ಈ ಸಂಸ್ಕøತಿಯ ಅವಶೇಷಗಳು ಹರಪ್ಪ ನೆಲೆಯಲ್ಲಿ ಹರಪ್ಪ ಸಂಸ್ಕøತಿಗಿಂತ ಪೂರ್ವದ ಘಟ್ಟಗಳಲ್ಲಿ ಕಂಡುಬಂದಿದೆ. ಹರಪ್ಪ ಸಂಸ್ಕøತಿಯ ಬೆಳವಣಿಗೆಗೆ ಈ ಸಂಸ್ಕøತಿಯೂ ಕಾರಣವಾಗಿದ್ದಿರಬೇಕು. ಜೋಬ್‍ನ ಪ್ರಾಚೀನ ಘಟ್ಟದ ಸಂಸ್ಕøತಿ ಹಿಸ್ಸಾರೆ 1ನೆಯ ಘಟ್ಟದಷ್ಟು ಹಳೆಯದು ಎನ್ನಲಾಗಿದೆ. ಜೋಬ್ ಪ್ರದೇಶದಲ್ಲಿಯ ಈ ಸಂಸ್ಕøತಿಗಳು ಕ್ರಿ. ಪೂ. 4-3ನೆಯ ಸಹಸ್ರ ಮಾನದಲ್ಲಿ ಪ್ರಚಲಿತವಾಗಿದ್ದುವು. ರಾಣಗೊಂಡೈ ನೆಲೆಯ ಮೇಲಿನ ಪದರಗಳಲ್ಲಿ ಹರಪ್ಪ ಸಂಸ್ಕøತಿಯ ಕಾಲದ ಮತ್ತು ಅದಕ್ಕೂ ಅನಂತರದ ಕೆಲವು ಸಂಸ್ಕøತಿಗಳು; ಅವಶೇಷಗಳು; ಬೆಳಕಿಗೆ ಬಂದಿವೆ.											 (ಎಂ.ಎಸ್.ಕೆ.ಎಂ.)
	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ